ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಪಾತ್ರದ ರಸ ಅಭ್ಯಾಸ ಅಗತ್ಯ: ನಾ. ಕಾರಂತ ಪೆರಾಜೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜುಲೈ 20 , 2015
ಜುಲೈ 20, 2015

ಪಾತ್ರದ ರಸ ಅಭ್ಯಾಸ ಅಗತ್ಯ: ನಾ. ಕಾರಂತ ಪೆರಾಜೆ

ಪುತ್ತೂರು : ಯಕ್ಷಗಾನ ಕಲೆಯಲ್ಲಿ ಪಾತ್ರಗಳು ಸಂವೇದನೆ ಕೊಡಬೇಕಾದರೆ ಪಾತ್ರದಲ್ಲಿನ ರಸಗಳನ್ನು ಅಭ್ಯಾಸ ಮಾಡಬೇಕು ಎಂದು ಯಕ್ಷಗಾನ ಕಲಾವಿದ, ಅಡಕೆ ಪತ್ರಿಕೆ ಉಪಸಂಪಾದಕ ನಾ. ಕಾರಂತ ಪೆರಾಜೆ ಹೇಳಿದರು.

ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿತ ಯಕ್ಷಗಾನ ಚಿಕ್ಕಮೇಳದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಶನಿವಾರ ನಡೆದ ಯಕ್ಷಗಾನ ನಾಟ್ಯ ತರಬೇತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಕಲಾಭಿಮಾನಿಗಳು ಪಾತ್ರದ ರಸವನ್ನು ಆಸ್ವಾದಿಸಬೇಕಾದರೆ ಕಲಾವಿದ ತನ್ನ ಪಾತ್ರಕ್ಕೆ ಜೀವ ತುಂಬಬೇಕು. ಆದರೆ ಇಂದಿನ ಕಾಲಘಟದಲ್ಲಿ ನೋಡುಗರ ಮನಸ್ಥಿತಿ ಬದ ಲಾಗಿದೆ. ಸೀಮಿತ ಅವಧಿಯ ಯಕ್ಷಗಾನದಲ್ಲಿ ಅವಧಿಗೆ ತಕ್ಕಂತೆ ಯಕ್ಷಗಾನ ಮುಗಿಯ ಬೇಕಾ ಗಿದೆ. ಯಕ್ಷಗಾನವನ್ನು ಶೈಕ್ಷಣಿಕವಾಗಿ ಕಲಿ ಯುವ ಬದಲು ಹೆಜ್ಜೆಗಳನ್ನು ಕಲಿಯುತ್ತಾ ಹೋದಂತೆ ಭಾವನೆಗಳು ಮೂಡುತ್ತವೆ ಎಂದರು.

ಯಕ್ಷಗಾನ ತರಬೇತುದಾರ ದಿವಾಣ ಶಿವಶಂಕರ್ ಭಟ್ ಮಾತನಾಡಿ, ತರಬೇತಿ ತಂಡ ಗಳು ಹುಟ್ಟಿಕೊಳ್ಳುವುದು ಸಂತೋಷದ ವಿಚಾರ. ಆದರೆ ಒಂದು ತಂಡ ಇನ್ನೊಂದು ತಂಡವನ್ನು ಒಡೆಯದಂತೆ ಎಚ್ಚರ ವಹಿಸಿ, ಯಕ್ಷಗಾನ ತಂಡಗಳನ್ನು ಪ್ರೋತ್ಸಾಹಿಸಿ ಎಂದರು.

ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೊಂಬೆಟ್ಟು ಸರಕಾರಿ ಪಪೂ ಕಾಲೇ ಜಿನ ಉಪನ್ಯಾಸಕ ರಾಮಚಂದ್ರ ಭಟ್ ಶುಭ ಹಾರೈಸಿದರು. ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ್, ಯಕ್ಷಗಾನ ತರಬೇತಿ ಕೇಂದ್ರದ ಸದಸ್ಯ ಲಿಂಗಪ್ಪ ನಾಯ್ಕ ಉಪಸ್ಥಿತರಿದ್ದರು.

ಸಂಘಟಕ ಭಾಸ್ಕರ್, ಜಗದೀಶ್, ಗಣೇಶ್ ಪಾಳೆಚ್ಚಾರು, ಕಟೀಲು ಮೇಳದ ಕಲಾವಿದ ವೆಂಕ ಟೇಶ್ ಆಚಾರ್ಯ, ನವೀನ್, ದೇವಿಪ್ರಸಾದ್ ಅತಿಥಿಗಳನ್ನು ಗೌರವಿಸಿದರು. ಕೊಂಬೆಟ್ಟು ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಶರತ್ ಆಳ್ವ ಸ್ವಾಗತಿಸಿದರು. ಗಣೇಶ್ ಪಾಳೆಚ್ಚಾರು ವಂದಿಸಿದರು. ಶ್ರೀ ಶಾರದಾ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳಾದ ಕಿರಣ್, ರಮೇಶ್ ಬಾಬು ಉಪಸ್ಥಿತರಿದ್ದರು.

ಹಿಂದೆ ರಾತ್ರಿಯಿಂದ ಬೆಳಗ್ಗಿನ ತನಕ ಯಕ್ಷಗಾನ ನಡೆಯುತ್ತಿದ್ದು, ಕಲಾಭಿಮಾನಿಗಳಿಗೆ ಯಕ್ಷಗಾನವನ್ನೂ ಪೂರ್ಣವಾಗಿ ಆಸ್ವಾದಿಸಲಾಗುತ್ತಿತ್ತು. ಬರಬರುತ್ತಾ ಯಕ್ಷಗಾನದಲ್ಲಿ ಕಾಲಮಿತಿ ತಂದಾಗ ಪಾತ್ರದಲ್ಲಿನ ನವರಸವನ್ನು ಪ್ರತಿಪಾದಿಸಲು ಅಸಾಧ್ಯವಾಯಿತು. ಯಕ್ಷಗಾನದಲ್ಲಿ ನವರಸವನ್ನು ಪ್ರತಿಪಾದಿಸಬೇಕಾದರೆ ಕಾಲಮಿತಿ ಇರಕೂಡದು. ಸಾಹಿತ್ಯ ಸಮ್ಮೇಳ ಸಹಿತ ಹಲವು ಕಾರ‌್ಯಕ್ರಮಗಳಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಕೊನೆಗೆ ಇಡುವ ಬದಲು ಕಾರ‌್ಯಕ್ರಮದ ನಡುವೆ ಇಟ್ಟಾಗ ಯಕ್ಷಗಾನವನ್ನು ಆಸ್ವಾದಿಸಲು ಸಹಕಾರಿಯಾಗುತ್ತದೆ. - ಭಾಸ್ಕರ ಭಾರ್ಯ , ಅಧ್ಯಕ್ಷರು, ಅಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು


ಕೃಪೆ : vijaykarnataka

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ